Share News

*ಹೆಣ್ಣೂರಿನಲ್ಲಿ ಹಾಡಹಗಲೇ ದರೋಡೆ ನಡೆಸುತ್ತಿದವರ ದಸ್ತಗಿರಿ, ಮೂರು ಠಾಣಾ ವ್ಯಾಪ್ತಿಯ 6 ಪ್ರಕರಣಗಳ ಪತ್ತೆ, ಐತಿಹಾಸಿಕ ಕಾರ್ಯಾಚರಣೆಗೆ ಸಾಕ್ಷಿಯಾದ ಸೂಪರ್ ಕಾಪ್ಸ್*

ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಹೆಣ್ಣೂರು ಜಂಕ್ಷನ್ ಬಳಿ ಈ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ವೇಳೆ ಇವರು ಹೆಣ್ಣೂರು, ಬಾಣಸವಾಡಿ ಮತ್ತು ಕೆ ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 6 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಬಂಧಿತರಿಂದ 5 ದ್ವಿಚಕ್ರ ವಾಹನಗಳು, 9 ಗ್ರಾಂ ಚಿನ್ನಾಭರಣ ಮತ್ತು 1 ರಡೋ (Rado) ವಾಚ್ ಜೊತೆಗೆ 50,000 ನಗದು ಮತ್ತು 2 ಮೊಬೈಲ್ ಫೋನ್‌ಗಳು ಹಿಡಿತಕ್ಕೆ ಸಿಕ್ಕಿದೆ.

ವಶಪಡಿಸಿಕೊಂಡ ಒಟ್ಟು ಆಸ್ತಿಯ ಮೌಲ್ಯ 8.58 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು. ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಉಮಾಶಂಕರ್ ಎನ್ ಹೆಚ್ ಅವರು ಈ ತಂಡದ ನೇತೃತ್ವ ವಹಿಸಿದ್ದರು. ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಶ್ರೀ. ದೀಪಕ್ ಎಲ್ ಮತ್ತು ಅವರ ಸಿಬ್ಬಂದಿ ತಂಡವು ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News