Share News

ಕನಕಪುರ: ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರನ್ನು ಕರೆದೊಯ್ದು, ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

​ಭೈರೇಶ್ ಅಲಿಯಾಸ್ ಚಿನ್ನು, ಗಗನ್, ಶಶಾಂಕ್ ಹಾಗೂ ಮುತ್ತುರಾಜ್ ಬಂಧಿತ ಆರೋಪಿಗಳು.

​ಘಟನೆಯ ವಿವರ:

ಪಟ್ಟಣದ ಕೆಎನ್‌ಎಸ್ (KNS) ಸರ್ಕಲ್ ಬಳಿ ವ್ಯಕ್ತಿಯೊಬ್ಬರಿಗೆ ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಆರೋಪಿಗಳು ತಮ್ಮ ವಾಹನದಲ್ಲಿ ಕರೆದೊಯ್ದಿದ್ದಾರೆ. ತದನಂತರ ಮಾರ್ಗಮಧ್ಯೆ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ನಗದು ಹಣ ಮತ್ತು ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದರು.

​ಬಂಧಿತ ಆರೋಪಿಗಳಿಂದ ₹4,800 ನಗದು, 1 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share News