ಬಾಗಲಕೋಟೆ: ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪೂರ ಎಸ್.ಕೆ. ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 4,50,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ:
ದಿನಾಂಕ 21.06.2026ರ ಮಧ್ಯರಾತ್ರಿ ಕಲ್ಲಾಪೂರ ಎಸ್.ಕೆ. ಗ್ರಾಮದ ಮನೆಯೊಂದರ ಕೀಲಿ ಮುರಿದು ಕಳ್ಳತನ ನಡೆದಿತ್ತು. ಈ ಕುರಿತು ಕೆರೂರ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ: 109/2026) ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳು:
ಮಾರುತಿ ಹನಮಂತ ಕಬಾಡದ (ಸಾ: ಕರಡಿಗುಡ್ಡ ಎಸ್.ಎ.)
ಅಲ್ತಾಫ ಇಮಾಮಹುಸೇನ ಬೇನೂರ (ಸಾ: ಬಾಗಲಕೋಟೆ)
ಮಹೃದಯೂನಿಸ್ ಮಹಿಬೂಬಸಾಬ (ಸಾ: ನವನಗರ ಬಾಗಲಕೋಟೆ)
ವಶಪಡಿಸಿಕೊಂಡ ಸಾಮಗ್ರಿಗಳು:
ಅಂದಾಜು 4,50,000 ರೂ. ಮೌಲ್ಯದ 30 ಗ್ರಾಂ ತೂಕದ ಬಂಗಾರ.
ಕೃತ್ಯಕ್ಕೆ ಬಳಸಿದ್ದ ಕಳ್ಳತನದ ಒಂದು ಮೋಟಾರ್ ಸೈಕಲ್ ಹಾಗೂ ಕಳ್ಳತನಕ್ಕೆ ಬಳಸಿದ ಸಾಮಗ್ರಿಗಳು.
ತನಿಖಾ ತಂಡ ಮತ್ತು ಶ್ಲಾಘನೆ:
ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಸಿದ್ದಾರ್ಥ ಗೋಯಲ್ (IPS), ಹೆಚ್ಚುವರಿ ಎಸ್ಪಿ ಶ್ರೀ ಜಗದೀಶ್ ಎಮ್. ಹಾಗೂ ಹುನಗುಂದ ಡಿಎಸ್ಪಿ ಶ್ರೀ ಸಂತೋಷ ಬನ್ನಟ್ಟಿ ಅವರ ಮಾರ್ಗದರ್ಶನದಲ್ಲಿ, ಬದಾಮಿ ವೃತ್ತದ ಸಿಪಿಐ ಕೆ.ಬಿ.ಬನ್ನೆ ಹಾಗೂ ಕೆರೂರ ಠಾಣೆ ಪಿಎಸ್ಐ ಐ.ಎಮ್.ಹಿರೇಗೌಡರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ತಂಡದಲ್ಲಿದ್ದ ಸಿಬ್ಬಂದಿಗಳಾದ ಎಚ್.ಎಚ್.ಹಿರ್ಲವರ (CHC 455), ಎ.ಎನ್.ಶಿರಹಟ್ಟಿ (CHC 402), ವಿಶ್ವನಾಥ ಮಠ (CPC 681), ಸುರೇಶ ಕುರಿ (CPC 572), ಪಿ.ಎಸ್.ಘಾಟಗೆ (CPC 1760), ಬಿ.ಎ.ವಾಲಿಕಾರ (CPC 1103) ಅವರ ತ್ವರಿತ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ನಗದು ಬಹುಮಾನ ಘೋಷಿಸಿದ್ದಾರೆ.