ಬಿಡದಿ ಬಳಿ ಬೃಹತ್ ನಕಲಿ ಔಷಧ ಜಾಲ ಪತ್ತೆ: ಫುಡ್ ಅಂಡ್ ಡ್ರಗ್ಸ್ ಇಲಾಖೆ ದಾಳಿ, ₹5 ಕೋಟಿ ಮೌಲ್ಯದ ಔಷಧ ಜಪ್ತಿ!
ಮೈಸೂರು ರಸ್ತೆಯ ಬಿಡದಿ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಬೃಹತ್ ನಕಲಿ ಔಷಧ ತಯಾರಿಕೆ ಹಾಗೂ ಮರುಪ್ಯಾಕಿಂಗ್ (Repacking) ಗೋದಾಮಿನ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಬರೋಬ್ಬರಿ ೫ ಕೋಟಿ...
ಶೂಟೌಟ್ ಬೆನ್ನಲ್ಲೇ ಸರಣಿ ಧ್ವಂಸ: ಚಾಮರಾಜನಗರದಲ್ಲಿ ಅರಣ್ಯ ಸಿಬ್ಬಂದಿ ಟಾರ್ಗೆಟ್? ಪೊಲೀಸರಿಂದ ತನಿಖೆ ತೀವ್ರ
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ತೀವ್ರ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ವನ್ಯಧಾಮದ ವ್ಯಾಪ್ತಿಯಲ್ಲಿರುವ ಕಳ್ಳಬೇಟೆ ತಡೆ ಶಿಬಿರಗಳು (Anti-Poaching Camps) ಹಾಗೂ ಅರಣ್ಯ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಸರಣಿ ದಾಳಿ ನಡೆಸಿರುವ ದಟ್ಟ...
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ಪ್ರಕರಣ: ಜೈಲು ಎಸ್‌ಪಿ ಹೇಳಿಕೆ ದಾಖಲಿಸಿಕೊಂಡ ಡಿಐಜಿ!
ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಮಧ್ಯವರ್ತಿ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಜಿನೇಂದ್ರ ಖನಗಾವಿ ಅವರು ಜೈಲು ಎಸ್‌ಪಿ ಅನ್ಷುಕುಮಾರ್ ಅವರ ಹೇಳಿಕೆಯನ್ನು...
ಗುಂಡ್ಲುಪೇಟೆ: ಬಂಡಿಪುರ ಅಂಚಿನ ಹೋಂಸ್ಟೇನಲ್ಲಿ ಜಿಂಕೆ ಕೊಂಬು, ತಲೆಬುರುಡೆ ಪತ್ತೆ; ವಶಕ್ಕೆ ಪಡೆದ ಅರಣ್ಯ ಇಲಾಖೆ!
ಗುಂಡ್ಲುಪೇಟೆ : ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕುಂದುಕೆರೆ ವಲಯಕ್ಕೆ ಒಳಪಡುವ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಂಸ್ಟೇಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಂಕೆಯ ಕೊಂಬು, ತಲೆಬುರುಡೆ ಹಾಗೂ ಅಪಾಯಕಾರಿ ತಂತಿ ಬೇಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರೈತ ಸಂಘ ಹಾಗೂ ಅರಣ್ಯಾಧಿಕಾರಿಗಳಿಂದ...
ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಬೈಕ್ ಕಳ್ಳ ಸೇರಿ ೪ ಆರೋಪಿಗಳ ಬಂಧನ, ₹೨೮ ಲಕ್ಷ ಮೌಲ್ಯದ ಸೊತ್ತು ಜಪ್ತಿ!
ಸಾಂಸ್ಕೃತಿಕ ನಗರಿ ಮೈಸೂರಿನ ದೇವರಾಜ ಉಪವಿಭಾಗದ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನ ಹಾಗೂ ಸರಣಿ ಸರಗಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ದೇವರಾಜ ಮತ್ತು ಲಷ್ಕರ್ ಠಾಣೆ ಪೊಲೀಸರು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು,...
ನರೋಣ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ಭೇದನೆ: ಆರೋಪಿ ಬಂಧನ, ₹26.81 ಲಕ್ಷಕ್ಕೂ ಅಧಿಕ ಮುದ್ದೇಮಾಲು ಜಪ್ತಿ!
ಕಲಬುರಗಿ: ಜಿಲ್ಲೆಯ ಆಳಂದ ಉಪವಿಭಾಗದ ನರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಬರೋಬ್ಬರಿ ₹26.81 ಲಕ್ಷಕ್ಕೂ ಅಧಿಕ ಮೌಲ್ಯದ ಮುದ್ದೇಮಾಲನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ವಿವರ: * ಆರೋಪಿ ಬಂಧನ:...
ಶಹಾಬಾದ್ ಉಪವಿಭಾಗದಲ್ಲಿ 9 ಕಳ್ಳತನ ಪ್ರಕರಣಗಳ ಭೇದನೆ: 17 ಆರೋಪಿಗಳ ಬಂಧನ, ₹15.88 ಲಕ್ಷ ಮೌಲ್ಯದ ಮುದ್ದೇಮಾಲು ಜಪ್ತಿ!
ಕಲಬುರಗಿ: ಜಿಲ್ಲೆಯ ಶಹಾಬಾದ್ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಒಟ್ಟು 17 ಆರೋಪಿಗಳನ್ನು ಬಂಧಿಸಿ, ₹15.88 ಲಕ್ಷ ಮೌಲ್ಯದ ಮುದ್ದೇಮಾಲನ್ನು ವಶಪಡಿಸಿಕೊಂಡಿದ್ದಾರೆ. ಮನೆ ಕಳ್ಳತನ, ನೀರೆತ್ತುವ ಪಂಪ್‌ಸೆಟ್ ಮತ್ತು ಕೇಬಲ್...
ವಸತಿ ಶಾಲೆಯಲ್ಲಿ ಚಿತ್ರಾನ್ನ ಸೇವಿಸಿ 12 ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು!
ತುಮಕೂರು: ವಸತಿ ಶಾಲೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದ ಬಳಿಕ ಸುಮಾರು 12 ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಣೆಚಂಡೂರಿನಲ್ಲಿ ನಡೆದಿದೆ. ಮಣೆಚಂಡೂರಿನಲ್ಲಿರುವ ‘ರಾಣಿ ಚೆನ್ನಮ್ಮ ವಸತಿ ಶಾಲೆ’ಯಲ್ಲಿ ಬೆಳಿಗ್ಗೆ 6 ಮತ್ತು 7ನೇ ತರಗತಿಯ...
ಕುಂದಗೋಳದಲ್ಲಿ ರಸ್ತೆಪಾಲಾಯ್ತು 1500 ಕೆಜಿ ಪಡಿತರ ಜೋಳ: ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಜನಾಕ್ರೋಶ!
ಕುಂದಗೋಳ: ಬಡವರ ಹೊಟ್ಟೆಗೆ ತಲುಪಬೇಕಿದ್ದ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯ ಸಾವಿರಾರು ಕೆಜಿ ಜೋಳ ರಸ್ತೆಪಾಲಾಗಿ ಮಣ್ಣುಗೂಡಿದ ಆಘಾತಕಾರಿ ಘಟನೆ ಕುಂದಗೋಳ ತಾಲೂಕಿನ ಹಿರೇನೇರ್ತಿ – ಚಿಕ್ಕನೇರ್ತಿ ಮಾರ್ಗಮಧ್ಯೆ ನಡೆದಿದೆ. ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಗೆ ಸಾರ್ವಜನಿಕರು ತೀವ್ರ ಆಕ್ರೋಶ...
ಗದಗದಲ್ಲಿ ಐಜಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪ್ರಾಪರ್ಟಿ ಪರೇಡ್: ₹3.68 ಕೋಟಿ ಮೌಲ್ಯದ ಕಳವು ಸ್ವತ್ತು ವಾರಸುದಾರರಿಗೆ ಹಸ್ತಾಂತರ!
ಗದಗ: ಗದಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳ್ಳತನ, ವಂಚನೆ ಹಾಗೂ ಮೊಬೈಲ್ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ₹3.685 ಕೋಟಿ ಮೌಲ್ಯದ ಕಳವು ಸ್ವತ್ತನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಆಗಸ್ಟ್ 17,...