Subscribe Now
Trending News

Category: ಜಿಲ್ಲಾ ಸುದ್ದಿಗಳು

ಉದ್ಯೋಗ

ಬೆಂಗಳೂರು: ಮುಖ್ಯ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್; ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ಜಾರಿ – ಡಿ.ಕೆ. ಶಿವಕುಮಾರ್ 

ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನಗರದ ಮುಖ್ಯ ರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಇನ್ನು ಮುಂದೆ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ...
ಜಿಲ್ಲಾ ಸುದ್ದಿಗಳು

ಮೈಸೂರು: ಹಾರ್ಡಿಂಗ್ ವೃತ್ತದ ಬಳಿ ಧರೆಗೆ ಉರುಳಿದ ಬೃಹತ್ ಮರ; ಕಾರು, ಆಟೋ ಜಖಂ – ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ 

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಳೆಯ ಬೃಹತ್ ಮರವೊಂದು ಏಕಾಏಕಿ ರಸ್ತೆಗೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮೈಸೂರಿನ ಪ್ರಮುಖ ಕೇಂದ್ರವಾದ ಹಾರ್ಡಿಂಗ್ ವೃತ್ತದ (Hardinge Circle) ಬಳಿ ಈ ಘಟನೆ ಸಂಭವಿಸಿದೆ. ಶನಿವಾರ ಹಾರ್ಡಿಂಗ್...
ಕ್ರೈಂ ಸುದ್ದಿಗಳು

ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿಶೀಟರ್ ಭೀಕರ ಕೊಲೆ; ಹಳೇ ದ್ವೇಷಕ್ಕೆ ಯುವಕ ಬಲಿ? 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕ್ರಿಮಿನಲ್‌ಗಳ ಅಟ್ಟಹಾಸ ಮುಂದುವರಿದಿದ್ದು, ಇಂದು ಮುಂಜಾನೆ ರಾಮಮೂರ್ತಿ ನಗರದ ಟಿ.ಸಿ. ಪಾಳ್ಯ ಮುಖ್ಯರಸ್ತೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ ಶವ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಮೃತನನ್ನು ಕಿರಣ್...
ಕ್ರೈಂ ಸುದ್ದಿಗಳು

ಭಟ್ಕಳ: ಅಕ್ರಮ ಜಾನುವಾರು ಸಾಗಾಟ ಜಾಲದ ಮೇಲೆ ಪೊಲೀಸರ ಸರಣಿ ದಾಳಿ; 23 ಜಾನುವಾರುಗಳ ರಕ್ಷಣೆ 

ಭಟ್ಕಳ: ತಾಲೂಕಿನಲ್ಲಿ ಬೇರುಬಿಟ್ಟಿರುವ ಅಕ್ರಮ ಜಾನುವಾರು ಸಾಗಾಟ ಜಾಲದ ಮೇಲೆ ಭಟ್ಕಳ ಪೊಲೀಸರು ಸಮರ ಸಾರಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಎರಡು ಪ್ರತ್ಯೇಕ ಕಡೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು, ವಧೆಗಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 23 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ....
ಜಿಲ್ಲಾ ಸುದ್ದಿಗಳು

ಉಡುಪಿ: ‘ಸಮಾಧಾನ ಮಹೋತ್ಸವ’ಕ್ಕೆ ಅಡ್ಡಿ; ಪ್ರತಿಭಟನೆ ನಡೆಸಿದ 38 ಹಿಂಜಾವೇ ಕಾರ್ಯಕರ್ತರ ಬಂಧನ, ಪ್ರಕರಣ ದಾಖಲು 

ಉಡುಪಿ: ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕ್ರೈಸ್ತರ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆಯ (ಹಿಂಜಾವೇ) ಮುಖಂಡ ಶ್ರೀಕಾಂತ್ ಶೆಟ್ಟಿ ಸೇರಿದಂತೆ ಒಟ್ಟು 38 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್...
ಜಿಲ್ಲಾ ಸುದ್ದಿಗಳು

ಕರ್ತವ್ಯನಿರತ ಟ್ರಾಫಿಕ್ ವಾರ್ಡನ್‌ಗೆ ಅಪಘಾತ: ಆರ್ಥಿಕ ಸಂಕಷ್ಟದಲ್ಲಿ ಕುಟುಂಬ – ನೆರವಿಗಾಗಿ ಮೊರೆ 

ಬೆಂಗಳೂರು: ಸಮಾಜ ಸೇವೆಯ ಹಂಬಲದಿಂದ ಸಂಚಾರಿ ನಿಯಮ ಪಾಲನೆಗೆ ಶ್ರಮಿಸುತ್ತಿದ್ದ ಟ್ರಾಫಿಕ್ ವಾರ್ಡನ್ ಒಬ್ಬರು ಭೀಕರ ಅಪಘಾತಕ್ಕೆ ತುತ್ತಾಗಿ, ಇಂದು ಚಿಕಿತ್ಸಾ ವೆಚ್ಚ ಭರಿಸಲಾಗದೆ ಆರ್ಥಿಕವಾಗಿ ಹೈರಾಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಪೀಣ್ಯದ ಮೈನಿ ಪ್ರಿಸಿಸನ್ ಪ್ರೊಡೆಕ್ಟ್ ಕಂಪನಿಯಲ್ಲಿ...
ಕ್ರೈಂ ಸುದ್ದಿಗಳು

ಒಂದೇ ದಿನ ಎರಡು ಕಡೆ ದರೋಡೆ ಮಾಡಿದ್ದ ಗ್ಯಾಂಗ್ ಸೆರೆ: ಹಲಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ 

ಬೆಂಗಳೂರು: ರಾಜಧಾನಿಯಲ್ಲಿ ಸಾರ್ವಜನಿಕರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ತಂಡವೊಂದನ್ನು ಹಲಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ ಅಂದಾಜು ₹ 75,000 ಎಂದು ತಿಳಿದುಬಂದಿದೆ....
ಜಿಲ್ಲಾ ಸುದ್ದಿಗಳು

ಶಿವಮೊಗ್ಗ: ಮೃಗಾಲಯದಲ್ಲಿ ಕರ್ತವ್ಯನಿರತ ಪಶುವೈದ್ಯೆ ಮೇಲೆ ನೀರಾನೆ ದಾಳಿ; ಚಿಕಿತ್ಸೆ ಫಲಕಾರಿಯಾಗದೆ ಸಾವು! 

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ (ಮೃಗಾಲಯ) ಆವರಣದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ಯುವ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿರುವ ಘೋರ ಘಟನೆ ಸಂಭವಿಸಿದೆ. ಮೃತರನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮೂಲದ...
ಕ್ರೈಂ ಸುದ್ದಿಗಳು

ನಾಸಿಕ್‌ನಲ್ಲಿ ನಕಲಿ ದೇವಮಾನವನ ರಾಸಲೀಲೆ ಬಯಲು: ಪೆನ್‌ಡ್ರೈವ್‌ನಲ್ಲಿತ್ತು 58 ಮಹಿಳೆಯರ ಅಶ್ಲೀಲ ವಿಡಿಯೋ! 

​ನಾಸಿಕ್ (ಮಹಾರಾಷ್ಟ್ರ): ಆಧ್ಯಾತ್ಮ ಮತ್ತು ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ನಕಲಿ ದೇವಮಾನವ, ನಿವೃತ್ತ ನೌಕಾ ಅಧಿಕಾರಿ ‘ಕ್ಯಾಪ್ಟನ್’ ಅಶೋಕ್ ಖಾರಟ್ ಎಂಬಾತನ ಕರಾಳ ಮುಖ ಈಗ ಪೊಲೀಸರ ತನಿಖೆಯಿಂದ ಬಯಲಾಗಿದೆ. ಆರೋಪಿಯ ರಾಸಲೀಲೆಯ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ...
ಕ್ರೈಂ ಸುದ್ದಿಗಳು

ಕಾಮಾಕ್ಷಿಪಾಳ್ಯ ಪೊಲೀಸರ ಮಿಂಚಿನ ಕಾರ್ಯಾಚರಣೆ: ಗಂಟಲು ಸೀಳಿದ್ದ ವ್ಯಕ್ತಿಗೆ ಕೇವಲ 8 ನಿಮಿಷದಲ್ಲಿ ಸ್ಪಂದಿಸಿ ಜೀವ ಉಳಿಸಿದ ‘ಹೋಯ್ಸಳ’ ತಂಡ! 

ಬೆಂಗಳೂರು: ರಾಜಧಾನಿಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಹಲ್ಲೆ ಪ್ರಕರಣವೊಂದರಲ್ಲಿ, ಪೊಲೀಸರ ತ್ವರಿತ ಸ್ಪಂದನೆಯಿಂದ ವ್ಯಕ್ತಿಯೊಬ್ಬರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಕೇವಲ ಎಂಟು ನಿಮಿಷಗಳಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಬೆಂಗಳೂರು ನಗರ ಪೊಲೀಸರು ತಮ್ಮ...