Subscribe Now
Trending News

Category: ಪೊಲೀಸ್ ಸುದ್ದಿಗಳು

ಜಿಲ್ಲಾ ಸುದ್ದಿಗಳು

ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಐಜಿಪಿ ವಿಕಾಸ್ ಕುಮಾರ್ ಭೇಟಿ: ಕಾನೂನು ಸುವ್ಯವಸ್ಥೆ ಪರಿಶೀಲನೆ 

ಮಡಿಕೇರಿ (ಕೊಡಗು): ರಾಜ್ಯ ಆಂತರಿಕ ರಕ್ಷಣಾ ವಿಭಾಗದ ಪೊಲೀಸ್ ಮಹಾನಿರೀಕ್ಷಕರಾದ (ಐಜಿಪಿ) ವಿಕಾಸ್ ಕುಮಾರ್ ವಿಕಾಸ್, ಐಪಿಎಸ್ ಅವರು ಇಂದು ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಅಧಿಕೃತ ಭೇಟಿ ನೀಡಿ, ಜಿಲ್ಲೆಯ ವಿವಿಧ ಆಡಳಿತಾತ್ಮಕ ಪ್ರಗತಿ ಹಾಗೂ ಕಾನೂನು ಸುವ್ಯವಸ್ಥೆಯ ಕುರಿತು...
ಅರಣ್ಯ ಇಲಾಖೆ

ಅಕ್ರಮ ಬೇಟೆಗಾರರ ಮೇಲೆ ಎಸ್‌ಟಿಪಿಎಫ್ ದಾಳಿ: ಇಬ್ಬರ ಬಂಧನ, 30 ಕೆ.ಜಿ. ಜಿಂಕೆ ಮಾಂಸ, ಬಂದೂಕು ವಶ 

ಚಾಮರಾಜನಗರ (ಜಿ.ಎಸ್. ಬೆಟ್ಟ): ವಿಶೇಷ ಹುಲಿ ಸಂರಕ್ಷಣಾ ದಳ (STPF) ವತಿಯಿಂದ ಚೌಡಳ್ಳಿ ಗ್ರಾಮದ ಸಮೀಪ ಇಂದು ಮುಂಜಾನೆ ನಡೆಸಲಾದ ಅಪ್ರತಿಮ ಬೇಟೆ ತಡೆ ಕಾರ್ಯಾಚರಣೆಯಲ್ಲಿ ಇಬ್ಬರು ಅಕ್ರಮ ಬೇಟೆಗಾರರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 30 ಕೆ.ಜಿ. ಚುಕ್ಕೆ ಜಿಂಕೆಯ ಮಾಂಸ,...
ಜಿಲ್ಲಾ ಸುದ್ದಿಗಳು

ಹಿರಿಯ ನಾಗರಿಕರ ಮನೆಗಳಿಗೆ ಎಸಿಪಿ ಅನುಷಾ ಜಿ. ಭೇಟಿ – ‘ಆಸರೆ’ ಯೋಜನೆಯಡಿ ಕುಂದುಕೊರತೆ ಆಲಿಕೆ 

ಬೆಂಗಳೂರು: ಬಾಣಸವಾಡಿ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ (ACP) ಶ್ರೀಮತಿ ಅನುಷಾ ಜಿ. ರವರು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ಸುರಕ್ಷತೆಗಾಗಿ ಜಾರಿಯಲ್ಲಿರುವ ‘ಆಸರೆ’ ಯೋಜನೆಯಡಿ ವಿವಿಧ ನಿವಾಸಗಳಿಗೆ ಖುದ್ದಾಗಿ ಭೇಟಿ ನೀಡಿ, ವೃದ್ಧರ ಯೋಗಕ್ಷೇಮ ವಿಚಾರಿಸಿದರು. ​ಭೇಟಿಯ...
ಕ್ರೈಂ ಸುದ್ದಿಗಳು

‘ಸೂಪಾ’ ಶ್ವಾನದೊಂದಿಗೆ ಪೊಲೀಸರ ಮೆಗಾ ಡ್ರಗ್ಸ್ ಬೇಟೆ; ರೆಸಾರ್ಟ್‌ಗಳ ಮೇಲೆ ದಾಳಿ, ಮೂವರ ವಿರುದ್ಧ ಎನ್‌ಡಿಪಿಎಸ್ ಕೇಸ್ 

ಗೋಕರ್ಣ: ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ಮಾದಕ ವಸ್ತುಗಳ ಜಾಲಕ್ಕೆ ಬ್ರೇಕ್ ಹಾಕಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಜುಲೈ 7ರಂದು ಗೋಕರ್ಣ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮಾದಕ ವಸ್ತು ಪತ್ತೆ ಶ್ವಾನ...
ಕ್ರೈಂ ಸುದ್ದಿಗಳು

ಬೇಲ್ ಮೇಲೆ ಬಂದು ಮತ್ತೆ ಜಿಂಕೆ ಬೇಟೆ; ಸಾತನೂರು ಅರಣ್ಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ನಾಲ್ವರ ಬಂಧನ 

ಕನಕಪುರ: ಕಾಡು ಪ್ರಾಣಿಗಳ ಹತ್ಯೆ ಯತ್ನ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನು (ಬೇಲ್) ಪಡೆದು ಹೊರಬಂದಿದ್ದ ವೃತ್ತಿಪರ ಬೇಟೆಗಾರರು, ಮತ್ತೆ ಜಿಂಕೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಜಾಲಕ್ಕೆ ಬಿದ್ದಿದ್ದಾರೆ. ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ...
ಕ್ರೈಂ ಸುದ್ದಿಗಳು

ವಿದ್ಯಾರಣ್ಯಪುರ ಪೊಲೀಸರ ಭರ್ಜರಿ ಬೇಟೆ; ₹2 ಕೋಟಿ ಮೌಲ್ಯದ 2.2 ಕೆಜಿ MDMA ಜಪ್ತಿ, ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಮರ ಸಾರಿರುವ ಬೆಂಗಳೂರು ನಗರ ಪೊಲೀಸರು ಮತ್ತೊಂದು ಭಾರಿ ಯಶಸ್ಸು ಸಾಧಿಸಿದ್ದಾರೆ. ನಗರದ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಿಷೇಧಿತ ಎಂ.ಡಿ.ಎಂ.ಎ....
ಕ್ರೈಂ ಸುದ್ದಿಗಳು

ಹೆಬ್ಬಗೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 16 ಕೆಜಿ ಗಾಂಜಾ ಜಪ್ತಿ, ಇಬ್ಬರು ಆರೋಪಿಗಳ ಬಂಧನ! 

ಬೆಂಗಳೂರು/ಹೆಬ್ಬಗೋಡಿ: ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಬರೊಬ್ಬರಿ 16 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ಸರಹದ್ದಿನ...
ಕ್ರೈಂ ಸುದ್ದಿಗಳು

ಆಸ್ತಿ ಪಾಲು ಕೇಳಿದ್ದಕ್ಕೆ ಹೆತ್ತ ಮಗಳ ಮೇಲೆಯೇ ತಂದೆ ಹಾಗೂ ಕುಟುಂಬಸ್ಥರಿಂದ ಭೀಕರ ಹಲ್ಲೆ! 

ಬೆಂಗಳೂರು ಗ್ರಾಮಾಂತರ (ದೇವನಹಳ್ಳಿ): ಆಸ್ತಿಯ ವಿಚಾರವಾಗಿ ಹೆತ್ತ ತಂದೆ ಮತ್ತು ಒಡಹುಟ್ಟಿದವರೇ ಸೇರಿ ಅಸಹಾಯಕ ಮಹಿಳೆಯೊಬ್ಬಳ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬಚ್ಚಹಳ್ಳಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ದುರ್ದೈವಿ ಮಹಿಳೆಯನ್ನು ಲಕ್ಷ್ಮಮ್ಮ...
ಜಿಲ್ಲಾ ಸುದ್ದಿಗಳು

ಹುಳಿಮಾವು ಪೊಲೀಸರ ಸಾಹಸಮಯ ಕಾರ್ಯಾಚರಣೆ: 5ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿಯಲು ನಿಂತಿದ್ದ ತಾಯಿಯ ಸುರಕ್ಷಿತ ರಕ್ಷಣೆ! 

ಬೆಂಗಳೂರು: ಮಹಡಿಯ ಮೇಲಿಂದ ಮಗುವಿನೊಂದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ತಾಯಿಯೊಬ್ಬರನ್ನು ಬೆಂಗಳೂರಿನ ಹುಳಿಮಾವು ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನ ಹಾಗೂ ತಾಳ್ಮೆಯಿಂದ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಪೊಲೀಸರ ಈ ಸಮಯೋಚಿತ ನಡೆಯಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ತಪ್ಪಿದಂತಾಗಿದೆ. ಜುಲೈ 5,...
ಕ್ರೈಂ ಸುದ್ದಿಗಳು

ಸಿಲಿಕಾನ್ ಸಿಟಿಯಲ್ಲಿ ವಿಕೃತಿಯ ಪರಾಕಾಷ್ಠೆ: ಸೈರನ್ ಹಾಕಿದ್ರೂ ದಾರಿ ಬಿಡದೆ ಆ್ಯಂಬುಲೆನ್ಸ್ ತಡೆದು ಬೈಕ್ ಸ್ಟಂಟ್ ಮಾಡಿದ ಖದೀಮರು! 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ವ್ಹೀಲಿಂಗ್ (Wheeling) ಹುಚ್ಚಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಈಗ ರೋಗಿಯೊಬ್ಬರ ಪ್ರಾಣ ಉಳಿಸಲು ಧಾವಿಸುತ್ತಿದ್ದ ಆ್ಯಂಬುಲೆನ್ಸ್ ಆಪತ್ಕಾಲಕ್ಕೂ ಕಂಟಕವಾಗಿ ಪರಿಣಮಿಸಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸುತ್ತಿದ್ದ ಆ್ಯಂಬುಲೆನ್ಸ್ ಒಂದನ್ನು ತಡೆದು, ಅದರ ಮುಂಭಾಗದಲ್ಲೇ ಪುಂಡರು ಬೈಕ್...