ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಪರವಾನಗಿ ರದ್ದು: ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಎಚ್ಚರಿಕೆ
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೊಲ್ಲಿ ರಾಷ್ಟ್ರಗಳ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲದ ಅಭಾವ ಸೃಷ್ಟಿಸಿ, ಗ್ಯಾಸ್ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಏಜೆನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು...
ನನ್ನಂತೆ ಯತೀಂದ್ರನನ್ನೂ ಬೆಳೆಸಿ: ವರುಣಾ ಜನತೆಗೆ ಸಿಎಂ ಸಿದ್ದರಾಮಯ್ಯ ಭಾವುಕ ಮನವಿ
ಮೈಸೂರು: “ರಾಜಕೀಯವಾಗಿ ನನ್ನನ್ನು ಹೇಗೆ ಕೈಹಿಡಿದು ನಡೆಸಿದಿರೋ, ಹಾಗೆಯೇ ನನ್ನ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೂ ಆಶೀರ್ವದಿಸಿ ಬೆಳೆಸಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣಾದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ವರಕೋಡು ಗ್ರಾಮದಲ್ಲಿ...
ಸಚಿವರ ಔತಣಕೂಟ ಮತ್ತು ಸಂಪುಟ ಪುನರ್ರಚನೆ ಚರ್ಚೆ: ಸಚಿವ ರಾಮಲಿಂಗರೆಡ್ಡಿ ಹೇಳಿಕೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಪುಟ ಪುನರ್ರಚನೆಯ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 16ರಂದು ಆಯೋಜಿಸಿರುವ ಔತಣಕೂಟದ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಕರೆದಿರುವ ಸಭೆಯ ಬಗ್ಗೆ ಮಾಹಿತಿ ನೀಡಿದ ಸಚಿವರು,...
ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಗೌರವಯುತ ಸ್ಪಂದನೆ ಸಿಗಲಿ: ನಾಗಲಕ್ಷ್ಮಿ ಚೌದರಿ ಕರೆ
ಮೈಸೂರು: “ಪೊಲೀಸ್ ಠಾಣೆಗೆ ದೂರು ನೀಡಲು ಅಥವಾ ಮಾಹಿತಿ ಪಡೆಯಲು ಬರುವ ಮಹಿಳೆಯರೊಂದಿಗೆ ಸೌಜನ್ಯ ಮತ್ತು ಗೌರವದಿಂದ ವರ್ತಿಸುವುದು ಅತ್ಯಗತ್ಯ” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ತಿಳಿಸಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಜನ...
ಅಕ್ರಮವಾಗಿ ಮಾರಕಾಸ್ತ್ರಗಳನ್ನಿಟ್ಟಿದ್ದ ಇಬ್ಬರು ರೌಡಿಗಳು ಅಂದರ್, ವಾರೆಂಟ್ ಇದ್ದರೂ ಡೋಂಟ್ ಕೇರ್ ಅಂತಿದ್ರು, ಬಿಸಿನೆಸ್ ಮಾಡಲು ಹೋಗಿ ಸಿಕ್ಕಿಬಿದ್ರು
ಬೆಂಗಳೂರಿನ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಬನ್ನೇರುಘಟ್ಟ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಮೇಲೆ ದಾಳಿ ನಡೆಸಿ, ಹೆಚ್.ಎ.ಎಲ್ ಪೊಲೀಸ್ ಠಾಣೆಯ ರೌಡಿ ಶೀಟರ್‌ನನ್ನು ಬಂಧಿಸಿದ್ದಾರೆ. ಈತನ ಬಳಿ ಪರವಾನಿಗೆ ಇಲ್ಲದ 2 ಪಿಸ್ತೂಲ್‌ಗಳು ಮತ್ತು 3 ಜೀವಂತ ಗುಂಡುಗಳು ಪತ್ತೆಯಾಗಿವೆ....
ಕೋರಮಂಗಲದಲ್ಲಿ ಅಣ್ಣ ಹಾಕಿದ ಮನೆಗೆ ಕನ್ನ, ಸಿ.ಇ.ಐ.ಆರ್ ತಂತ್ರಾಂಶದಿಂದ ಸಿಕ್ಕಿದ್ದು ಬರೋಬ್ರಿ 321 ಮೊಬೈಲ್ಸ್, ಇವು ಆಗ್ನೇಯ ವಿಭಾಗದ ರೋಚಕ ಕಾರ್ಯಾಚರಣೆಗಳು
ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸರು ನಡೆಸಿದ ಎರಡು ಪ್ರಮುಖ ಕಾರ್ಯಾಚರಣೆಗಳ ವಿವರಗಳು ಬೆಚ್ಚಿಬೀಳಿಸುವ ಸತ್ಯಗಳನ್ನು ಅನಾವರಣಗೊಳಿಸಿದೆ. ಕೆಲಸದಾಕೆಯಿಂದ ಕಳ್ಳತನ ಮತ್ತು ವಿಶೇಷ ಕಾರ್ಯಚರಣೆಯಲ್ಲಿ 321 ಮೊಬೈಲ್ ಫೋನ್ ಗಳ ಪತ್ತೆ ಕಾರ್ಯ ನಡೆದಿದೆ. ಕೋರಮಂಗಲದ ಜಕ್ಕಸಂದ್ರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ದೂರುದಾರರು...
ಮಹಾನಗರಿಗೆ ಅತಿಥಿಗಳೇ ಶತ್ರುಗಳು, ಮಾದಕ ವಸ್ತುಗಳ ಮಾಟಕ್ಕೆ ಬ್ರೇಕ್, ಅಂತರ್ರಾಜ್ಯದ ನಾಲ್ಕು ಪೆಡ್ಲರ್ಗಳ ದಸ್ತಗಿರಿ
ನಗರದ ಮಹದೇವಪುರ, ಕೆ.ಜಿ ಹಳ್ಳಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ, ಮೂವರು ಹೊರರಾಜ್ಯದ...
ತಮಿಳುನಾಡಿನ ಪ್ರವಾಸಕ್ಕೆ ಮನೆಯವರು, ಕನ್ನ ಹಾಕಲು ಕಿಟಕಿಯೊಳಗೆ ನುಗ್ಗಿದ ಕಿರಾತಕರು, ವಿಶೇಷ ತಂಡ ರಚಿಸಿ ಹಿಡಿದ ಪೊಲೀಸರು
ಬನಶಂಕರಿ 2ನೇ ಹಂತದ ನಿವಾಸಿಯೊಬ್ಬರು ಕಳೆದ ಜನವರಿ 25ರಂದು ಕುಟುಂಬ ಸಮೇತ ತಮಿಳುನಾಡಿನ ಆರ್ಕಾಟ್‌ಗೆ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ, ಅವರ ಮನೆಯ ಬೀಗ ಮುರಿದು ನೂರಾರು ಗ್ರಾಂ ಚಿನ್ನ ಹಾಗೂ ಪ್ಲಾಟಿನಂ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ...
ಪೊಲೀಸ್ ಸಮವಸ್ತ್ರದಲ್ಲಿ ಬಂದ ಖತರ್ನಾಕ್ ಕಳ್ಳ, ಪೆರೋಲ್ ಮೇಲೆ ಆಚೆ ಬಂದು ನಡೆಸಿದ್ದ ದುಷ್ಟ ಕೃತ್ಯ, ನಾಲ್ಕೇ ದಿನದಲ್ಲಿ ಭೇಟಿಯಾಡಿದ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ಭಾಸ್ಕರ್ ಅಂಡ್ ಟೀಮ್
ಬ್ಯಾಡರಹಳ್ಳಿಯ ಬಿ.ಇ.ಎಲ್ ಲೇಔಟ್‌ನಲ್ಲಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಸಿಸಿಟಿವಿ ಚೆಕ್ ಮಾಡುವ ನೆಪದಲ್ಲಿ ನುಗ್ಗಿದ್ದನು. ನಂತರ ತನ್ನ ಸಹಚರನನ್ನು ಕರೆಸಿಕೊಂಡು, ದಂಪತಿಗಳ ಕೈಕಾಲು ಕಟ್ಟಿ ಹಾಕಿ ಚಾಕು ತೋರಿಸಿ ಬೆದರಿಸಿದ್ದರು. ಮನೆಯಲ್ಲಿದ್ದ 677...