Share News

*ಕಾರ್ಯಕ್ರಮದಲ್ಲಿ ಕಳುವಾಗಿದ್ದ ಜಂಗಮವಾಣಿ, ಹುಡುಕಿದ್ದು 1 ಐಫೋನ್ ಸಿಕ್ಕಿದ್ದು 3 ಮೊಬೈಲ್ ಫೋನ್, ಠಾಣಾ ಜಮೀನಿನ ಮೇಲೆ ಆರೋಪಿ ಬಿಡುಗಡೆ*

ದಿನಾಂಕ 30/03/2026 ರಂದು ಚಪ್ಪರಕಲ್ಲು ರಸ್ತೆಯ ಟೆರ್ರಾ ಫಾರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಿರ್ಯಾದುದಾರರ ಐಫೋನ್ ಕಳುವಾದ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಾದರಹಳ್ಳಿ ಗೇಟ್ ಬಳಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ವಿವಿಧ ಕಡೆಗಳಲ್ಲಿ ಮೊಬೈಲ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ 2,45,000 ಮೌಲ್ಯದ ಒಟ್ಟು 03 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಂತರ ಆತನನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಜಿ ಕೆ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮತ್ತು ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಹರ್ಷ ಅವರ ನೇತೃತ್ವದಲ್ಲಿ ಚಿಕ್ಕಜಾಲ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಆನಂದ್ ಎನ್ ಹಾಗೂ ತಂಡದವರು ನಿರ್ವಹಿಸಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್


Share News